ಹೆಸರುಘಟ್ಟದಲ್ಲಿ ?ವರದನಾಯಕ
Posted date: 23 Mon, Jul 2012 ? 12:12:54 PM
 ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್ ಅವರು ನಿರ್ಮಿಸುತ್ತಿರುವ ‘ವರದನಾಯಕ’ ಚಿತ್ರದ ಒಂದುಸಾರಿ ಮನೆಗೆ ಬಂದು ಹೋಗೆ ನಿನ್‌ಹಿಂದೆ ಓಡ್ ಬರುತ್ತೀನಿ ಎಂಬ ಹಾಡಿನ ಚಿತ್ರೀಕರಣ ಹೆಸರುಘಟ್ಟದಲ್ಲಿ ನಡೆಯಿತು. ಹರ್ಷ ನೃತ್ಯ ಸಂಯೋಜಿಸಿದ ಈ ಗೀತೆಗೆ ಚಿರಂಜೀವಿ ಸರ್ಜಾ ಹೆಜ್ಜೆ ಹಾಕಿದರು.
    ಅಯ್ಯಪ್ಪ.ಪಿ.ಶರ್ಮ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಕಿಚ್ಚ ಸುದೀಪ್ ಹಾಗೂ ಚಿರಂಜೀವಿ ಸರ್ಜಾ ನಟಿಸುತ್ತಿದ್ದಾರೆ. ನಿಖಿತಾ ಪಾಟೀಲ್, ಸಮೀರಾ ರೆಡ್ಡಿ, ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಶೋಭ್‌ರಾಜ್, ಶರತ್ ಲೋಹಿತಾಶ್ವಾ, ಬುಲೆಟ್ ಪ್ರಕಾಶ್, ಶರಣ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
    ರಾಖೇಶ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಶ್ವರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ನರಸಿಂಹ ಮತ್ತು ರಾಮಣ್ಣನವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed